
ಇಂದು ಏಪ್ರಿಲ್ 1. ವಿಶ್ವ ಮೂರ್ಖರ ದಿನ. ಇದು ಮಿತಿಯಿಲ್ಲದ ನಗು, ಹಾಸ್ಯ ಮತ್ತು ಸಂತೋಷದ ದಿನವಾಗಿದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಅಚ್ಚರಿಗೊಳಿಸಲು ಆಸಕ್ತಿದಾಯಕ ವಿಚಾರಗಳನ್ನು ತರುತ್ತಾರೆ ಮತ್ತು ನಂತರ ಅದು ನಕಲಿ ಎಂದು ಬಹಿರಂಗಪಡಿಸುತ್ತಾರೆ.
ಮೂರ್ಖರ ದಿನವು 1582 ರಲ್ಲಿ ಪ್ರಾರಂಭವಾಯಿತು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ . ಇದು ಜೂಲಿಯನ್ ಕ್ಯಾಲೆಂಡರ್‌ನಿಂದ ಫ್ರೆಂಚ್ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಪರಿವರ್ತನೆಯ ಸಮಯದಲ್ಲಾದ ಘಟನೆ.” ಪೋಪ್ ಗ್ರೆಗೊರಿ 13″ ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯ ಮಾಡಿದ್ದು ಹೊಸ ಕ್ಯಾಲೆಂಡರ್ ನಲ್ಲಿ ಜನವರಿ 1 ರಂದು ಹೊಸ ವರ್ಷ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ ನಂತರ ಈ ಆಚರಣೆಯು ಪ್ರಾರಂಭವಾಯಿತು. ಈ ರೀತಿ ಜೂಲಿಯನ್ ಕ್ಯಾಲೆಂಡರ್ ಅನ್ನು ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಬದಲಾಯಿಸಿದಾಗ ಹೊಸ ವರ್ಷವು ಜನವರಿ 1 ರಿಂದ ಶುರುವಾಯಿತು .
ಹೀಗೆ ಪ್ರಾರಂಭವಾಗುವ ಜನವರಿ 1 ರಂದು ವರ್ಷದ ಕ್ಯಾಲೆಂಡರ್ ಅನ್ನು ಫ್ರಾನ್ಸಿನ ಆಡಳಿತಗಾರರು ಅಧಿಕೃತವಾಗಿ ಅನುಮೋದನೆ ಮಾಡಿದರು .
ತುಂಬಾ ಜನರು ಕ್ಯಾಲೆಂಡರ್ ಬದಲಾಗಿದೆ ಎಂದು ತಿಳಿಯದೆ ಏಪ್ರಿಲ್ 1ರಂದು ಹೊಸ ವರ್ಷ ಆಚರಿಸುತ್ತಾ ಬರುತ್ತಿದ್ದರು ಇಂಥವರನ್ನು ಅಪಹಾಸ್ಯ ಮಾಡುತ್ತಾ ಮೂರ್ಖರ ದಿನವನ್ನು ಆಚರಿಸಲಾಗುತ್ತದೆ ಎಂದೂ ಹೇಳಲಾಗುತ್ತದೆ .ಇಂಗ್ಲಿಷ್ ಬರಹಗಾರ ಜೆಫ್ರಿ ಚೌಸರ್ ಅವರ ಕ್ಯಾಂಟರ್ಬರಿ ಕಥೆಯಿಂದ ಹುಟ್ಟಿಕೊಂಡಿದೆ ಎಂದೂ ಹೇಳಲಾಗುತ್ತದೆ.